Activities

Activities

  1. ಅಕ್ಟೋಬರ್  09 2024: ಎಸ್.ಎಮ್.ಎಸ್.ಕಾಲೇಜು ಬ್ರಹ್ಮಾವರ ಇಲ್ಲಿನ ಹಿಂದಿ ವಿಭಾಗದ ವತಿಯಿಂದ ಹಿಂದಿ ದಿನಾಚರಣೆ ನಡೆಯಿತು. ಲಿಟ್ಲ ರಾಕ್ ಇಂಡಿಯನ್ ಸ್ಕೂಲ್ ನ ನಿವೃತ್ತ ಅಧ್ಯಾಪಕರರಾದ ಶ್ರೀ ವಾಸುದೇವ ಭಟ್ಟ ಇವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಭಾಷಾ ಪ್ರೇಮ ಅಗತ್ಯ, ಸಂವಿಧಾನಾತ್ಮಕವಾಗಿ ಗುರುತಿಸಲ್ಪಟ್ಟ ಎಲ್ಲಾ ಭಾಷೆಗಳನ್ನು ಗೌರವಿಸಬೇಕು ಎಂದು ತಿಳಿಸಿದರು. ರಾಷ್ಟ್ರೀಯ ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ಹಿಂದಿ ಭಾಷೆಯ ಮಹತ್ವವನ್ನು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಬರ್ಟ್ ರಾಡ್ರಿಗಸ್ ಇವರು ಅಧ್ಯಕ್ಷತೆ ವಹಿಸಿದ್ದರು. 

 

  2 ಉಡುಪಿ ಜಿಲ್ಲಾ ಕನ್ನಡ  ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ತಾಲೂಕು ಘಟಕ ಹಾಗೂ ಕುವೆಂಪು ಸಾಹಿತ್ಯ ಸಂಘ ಎಸ್ ಎಂ ಎಸ್ ಕಾಲೇಜ್ ಬ್ರಹ್ಮಾವರ ಜಂಟಿ  ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಸಾಹಿತ್ಯ ಪ್ರೇರಣೆ ಕಾರ್ಯಕ್ರಮ ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ರಾಬರ್ಟ್ ರಾಡ್ರಿಗಸ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. 

ಸಾಹಿತ್ಯ ಸಂಘದ ಸಲಹೆಗಾರರಾದ ಡಾಕ್ಟರ್ ಮಂಜುನಾಥ ಉಡುಪ ಕಾರ್ಯಕ್ರಮದ ಪ್ರಸ್ತಾವನೆ ಯೊಂದಿಗೆ ಸ್ವಾಗತಿಸಿದರು. ಸಂಪನ್ಮೂಲ ವ್ಯಕ್ತಿಗಳಾಗದ ಉಪೇಂದ್ರ ಸೋಮ ಯಾಜಿ, ಸುರೇಶ ತುಂಗ, ಗುಂಡ್ಮಿ ರಾಮಚಂದ್ರ ಐತಾಳ್ ಕನ್ನಡ ನಾಡು ನುಡಿ ಬಗ್ಗೆ ಉಪನ್ಯಾಸ ನೀಡಿದರು. 

Courses Offered